ಹಬ್ಬದ ವಾತಾವರಣದಲ್ಲಿ ರಂಗೇರಿದ ಸಿರಿಗನ್ನಡಕೂಟದ ೨ನೇ ಆಡಳಿತ ಮಂಡಳಿಯ ಚುನಾವಣೆ

ವರದಿ: ಕಮಲಾಕ್ಷ ಎಚ್.ಎ, ಮ್ಯೂನಿಕ್ ಜರ್ಮನಿ

ದಿನಾಂಕ ೨೪.೦೨.೨೦೨೪ ರಂದು ಮ್ಯೂನಿಕ್ ನ ಐನೆವೆಲ್ಟ್ ಹೌಸ್ ಪುರಸಭೆಯಲ್ಲಿ ಸಿರಿಗನ್ನಡಕೂಟ ಮ್ಯೂನಿಕ್ e.V.ನ ೨ನೇ ಅವಧಿಯ ಪದಾಧಿಕಾರಿಗಳ ಆಯ್ಕೆಯ ಚುನಾವಣೆ ಮೊದಲನೇ ಅವಧಿ ಅಧ್ಯಕ್ಷರಾದ ಶ್ರೀಯುತ ಕಾರ್ತಿಕ್ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಸುಗಮವಾಗಿ ಮತ್ತು ಯಶಸ್ವಿಯಾಗಿ ನಡೆಯಿತು.

೨ ವರ್ಷಕ್ಕೊಮ್ಮೆ ಆಡಳಿತ ಮಂಡಳಿ ಚುನಾವಣೆಯನ್ನು ನಡೆಸಲಾಗುವುದು. ೨೦೨೪-೨೦೨೬ ರ ಸಾಲಿನ ಅವಧಿಗಾಗಿ ನಡೆದ ಈ ಚುನಾವಣೆಯಲ್ಲಿ, ಚುನಾವಣಾ ಅಧಿಕಾರಿಗಳಾಗಿ ಇಲ್ಲಿನ ಮ್ಯೂನಿಕ್ ತಮಿಳು ಸಂಘ ಪ್ರತಿನಿಧಿ ಅಂಗೇಶ್ವರನ್ ತಂಗಸ್ವಾಮಿ ಮತ್ತು ಮಹಾರಾಷ್ಟ್ರ ಮಂಡಲ್ ಮ್ಯೂನಿಕ್ ಪ್ರತಿನಿಧಿಗಳಾದ ಗೌರವ್ ಪೊಟ್ಫೋದೆ , ವಿಜಯಕುಮಾರ್ ಕುಲ್ಕರ್ಣಿ ಚುನಾವಣೆಯ ಮೇಲ್ವಿಚಾರಣೆಯ ಜವಾಬ್ದಾರಿ ಹೊತ್ತು ಸಂಪೂರ್ಣ ಪ್ರಕ್ರಿಯೆಯನ್ನು ಪ್ರಜಾಸತ್ತಾತ್ಮಕವಾಗಿ ನಡೆಸಿಕೊಟ್ಟರು.

ಚುನಾವಣಾ ಅಧಿಕಾರಿಗಳಿಂದ ದೀಪ ಬೆಳಗುವದರ ಮೂಲಕ , ವೈಷ್ಣವಿ ಕಾರ್ತಿಕ್ ರವರ ಇಂಪಾದ ಗಣೇಶ ಸ್ತೋತ್ರದ ಆಲಿಕೆಯಿಂದ ಕಾರ್ಯಕ್ರಮದ ಶುಭಾರಂಭ ವಾಯಿತು.

ಚುನಾವಣಾ ಪ್ರಕ್ರಿಯೆ ಶುರುವಾಗುವುದಕ್ಕೂ ಮುನ್ನ ಸಂಘದ ಅಧ್ಯಕ್ಷರಾಗಿದ್ದ ಶ್ರೀ ಕಾರ್ತಿಕ್ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ, ಕಾರ್ಯದರ್ಶಿಗಳಾಗಿದ್ದ ಶ್ರೀಯುತ ಸುಹಾಸ್ ಅವರು ಸಂಘದ ೨೦೨೩ನೇ ವರ್ಷದ ೨ನೇ ವಾರ್ಷಿಕ ಸಭೆಯನ್ನು ಉದ್ದೇಶಿಸಿ, ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮತ್ತು ವಾರ್ಷಿಕ ವರದಿಯನ್ನು ನೀಡಿದರು.
ಸಂಘದ ಉಪಾಧ್ಯಕ್ಷೆಯಾದ ಶ್ರೀಮತಿ ದೀಪಿಕಾ ಕೊಂಡಜ್ಜಿ ಹಾಗೂ ಆಡಳಿತ ಮಂಡಳಿಯ ಇತರೆ ಸದಸ್ಯರುಗಳಾದ ಶ್ರೀ ಅರವಿಂದ ಸುಬ್ರಹ್ಮಣ್ಯ , ಶ್ರೀ ಗಿರೀಶ್ ರಾವಂದೂರು, ಶ್ರೀ ಲೋಕೇಶ್ ದೇವರಾಜ್ ಮತ್ತು ಶ್ರೀ ರಾಜ್. ಜಿ.ಎಸ್ (ಆನ್ಲೈನ್) ಅವರು ಉಪಸ್ಥಿತರಿದ್ದರು.

೨೦೨೨ ಮತ್ತು ೨೦೨೩ ನೇ ಸಾಲಿನ ಆಡಳಿತ ಮಂಡಳಿಯ ನೇತೃತ್ವದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ವಿವರಿಸುತ್ತಾ ಕೂಟವು ಸುಮಾರು ೨೬ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟುತು . ನಮ್ಮನಾಡಿನ ಹಬ್ಬಗಳಾದ ಸಂಕ್ರಾಂತಿ, ಯುಗಾದಿ, ಗಣೇಶಚತುರ್ಥಿ, ದೀಪಾವಳಿ, ಜೊತೆಗೆ ಕನ್ನಡಿಗರ ಹಬ್ಬ ಕನ್ನಡರಾಜ್ಯೋತ್ಸವ , ಸ್ವಾತಂತ್ರ್ಯೋತ್ಸವದ ಸಲುವಾಗಿ ಸೈಕಲ್ ಸವಾರಿ, ಹೊರದೇಶಕ್ಕೆ ಕಾಲಿಟ್ಟ ಹೊಸಬರ ಸಹಾಯಕ್ಕೆ ನಮಸ್ಕಾರ ನ್ಯೂಬೀಸ್ ಕಾರ್ಯಕ್ರಮಗಳು, ರಾಜ್ಯೋತ್ಸವದ ಅಂಗವಾಗಿ ಆನ್ಲೈನ್ ರಸಪ್ರಶ್ನೆ ಕಾರ್ಯಕ್ರಮಗಳು , ಛಾಯಾಚಿತ್ರಣ ಕಾರ್ಯಾಗಾರಗಳು, ಚಾರಿಟಿಗಾಗಿ ಸೈಕಲ್ ಸವಾರಿ ಮತ್ತು ಯಕ್ಷಗಾನ ಪ್ರದರ್ಶನ, ಪಂಡಿತ್ ಪ್ರವೀಣ್ ಗೋಡ್ಕಿಂಡಿ ಅವರ ಕೊಳಲು ವಾದನ ಕಾರ್ಯಕ್ರಮ ಸಾಹಿತ್ಯಾಸಕ್ತರಿಗೆ ವೇದಿಕೆಯಾಗಿ ಕನ್ನಡಕಹಳೆ ಕಾರ್ಯಕ್ರಮ, ಉಪನ್ಯಾಸ ಕಾರ್ಯಕ್ರಮ. ಹೀಗೆ ಸಿರಿಗನ್ನಡ ಕೂಟ ಮ್ಯೂನಿಕ್ e.V. ವಿವಿಧ ರೀತಿಯ ಹಲವಾರು ಕಾರ್ಯಕ್ರಮ ಹಮ್ಮಿಕೊಂಡು ಕನ್ನಡಾಂಬೆಯ ಸೇವೆಯಲ್ಲಿ ತನ್ನನು ತೊಡಗಿಸಿಕೊಂಡಿತು.

ನಮ್ಮ ಸಿರಿಗನ್ನಡ ಕೂಟ ಪ್ರಜಾಸತ್ತಾತ್ಮಕವಾಗಿ ಕೂಟದ ಸದಸ್ಯರೆಲ್ಲರೂ ಸೇರಿ ತಮ್ಮ ಮತಗಳ ಮೂಲಕ ಆಡಳಿತ ಮಂಡಳಿಯನ್ನ ಚುನಾಯಿಸುವ ಪ್ರಕ್ರಿಯೆ ಪಾಲಿಸುವ ಕೆಲೆವೇ ಕೂಟಗಳಲ್ಲಿ ಒಂದು ಎನಿಸಿಕೊಳ್ಳುವ ಹೆಗ್ಗಳಿಕೆಗೆ ಪಾತ್ರವಾಗಿದೆ .ಇದೊಂದು ಕೂಟದ ಹಬ್ಬವೇ ಸರಿ ಎನನ್ನುವ ಮಟ್ಟಿಗೆ ಚುನಾವಣೆಯ ದಿನ ಸಜ್ಜಾಗಿತ್ತು. ಚುನಾವಣೆಯ ಸ್ವಯಂ ಸೇವಕ ಸಮಿತಿಯಲ್ಲಿ ಕೂಟದ ಸದಸ್ಯರಾದ ದೀಪಕ್ R J , ಮಯೂರ್ ಜಲವಾಡಿ, ಪಣಿಕಿರಣ್ ಪಿರಿಯಾಪಟ್ಟಣ, ಸಚಿನ್ , ಸಂಜಯ್ ಪಾಟೀಲ್, ಕಾರ್ತಿಕ್ , ಚುನಾವಣೆಯ ಎಲ್ಲ ಭಾಗಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು , ಚುನಾವಣೆ ಸಕ್ರಿಯವಾಗಿ ನಡೆಯುವಲ್ಲಿ ಮುಖ್ಯ ಪಾತ್ರ ವಹಿಸಿದರು. ಕೂಟದ ಪ್ರಾಯೋಜಕರಲ್ಲಿ ಒಬ್ಬರಾದ ಇಂಡಿಯನ್ ಮ್ಯಾಂಗೋ , ದಿನದ ಲಘು ಉಪಹಾರದ ವ್ಯವಸ್ಥೆ ಅಚ್ಚುಕಟ್ಟಾಗಿ , ರುಚಿಕರವಾಗಿ ಮಾಡಿಕೊಟ್ಟರು. ಶ್ರೀ ವಿಕಾಸ್ ತಪನ್ ರವರು ಸ್ವಯಂ ಸೇವಕರಾಗಿ ತೊಡಗಿಸಿಕೊಂಡಿದ್ದಕ್ಕೆ ಕೂಟ ಆಭಾರವನ್ನ ವ್ಯಕ್ತ ಪಡಿಸುತ್ತುದೆ.

ಸಂಘದ ೨ನೇ ಅವಧಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಶ್ರೀ ಶ್ರೀಧರ್ ಲಕ್ಷ್ಮಾಪುರ, ಉಪಧ್ಯಕ್ಷೆಯಾಗಿ ಶ್ರೀಮತಿ ವೈಷ್ಣವಿ ಕುಲಕರ್ಣಿ, ಕಾರ್ಯದರ್ಶಿಯಾಗಿ ಶ್ರೀ ಸೀತಾರಾಮ ಶರ್ಮ, ಖಜಾಂಜಿ ಮತ್ತು ಮಾಹಿತಿ ತಂತ್ರಜ್ಞಾನದ ಅಧಿಕಾರಿಯಾಗಿ ಶ್ರೀ ಮಹೇಂದ್ರ ಭದ್ರಣ್ಣನವರ್, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕುಮಾರಿ ಚಂದನ ಮಾವಿನಕೆರೆ, ಸಾಂಸ್ಕೃತಿಕ ಮತ್ತು ಕ್ರೀಡಾಧಿಕಾರಿಯಾಗಿ ಶ್ರೀಮತಿ ದಿವ್ಯ ಎಚ್.ಎನ್ ಹಾಗೂ ಶಿಕ್ಷಣ ಮತ್ತು ಸಾಹಿತ್ಯ ಮೇಲುಸ್ತುವಾರಿಯನ್ನು ಶ್ರೀ ಕಮಲಾಕ್ಷ ಎಚ್.ಎ ಅವರುಗಳು ಚುನಾಯಿತರಾಗಿದ್ದಾರೆ.
ಚುನಾವಣೆ ಪ್ರಕ್ರಿಯೆಯಲ್ಲಿ ೧೪೫ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಮತ ಚಲಾಯಿಸಿ , ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ – ಕೂಟದ ಪರವಾಗಿ ಇವರೆಲ್ಲರಿಗೂ ಅಭಿನಂದನೆಗಳು.
ಕೂಟವನ್ನು ೨ ವರ್ಷ ನಡೆಸುವಲ್ಲಿ, ಪ್ರತಿನಿಧಿಸುವಲ್ಲಿ, ಹೊಸ ೭ ಮಂದಿಯಲ್ಲಿ ತಮ್ಮ ವಿಶ್ವಾಸ, ಹರಕೆ, ನಂಬಿಕೆಯನ್ನ ಪ್ರದರ್ಶಿದ್ದಾರೆ.
ಅವರೆಲ್ಲರೂ ಇದೇ ರೀತಿ ಮುಂದೆ ೨ ವರ್ಷ ಕೈ ಹಿಡಿದು , ಆಡಳಿತ ಮಂಡಳಿಗೆ ತಮ್ಮ ಬೆಂಬಲ ನೀಡುತ್ತಾರೆ ಎಂಬ ನಂಬಿಕೆ ಕೂಟದ್ದಾಗಿದೆ.
ಇದೇ ಸಂದರ್ಭದಲ್ಲಿ ಕೂಟದ ಧ್ವನಿಯಾದ ಹೊನ್ನುಡಿ ಪತ್ರಿಕೆಯ ೩ನೇ ಆವೃತ್ತಿಯ ಬಿಡುಗಡೆ ಮಾಡಲಾಯಿತು.
ಮೊದಲನೇ ಅವಧಿಯ ಆಡಳಿತ ಮಂಡಳಿ ಸದಸ್ಯರು ನೂತನ ಚುನಾಯಿತರಿಗೆ ಶುಭ ಹಾರೈಸಿದರು ಮತ್ತು ಮುಂಬರುವ ದಿನಗಳಲ್ಲಿ ಸಂಪೂರ್ಣ ಮಾಹಿತಿ ಸಮೇತ ಅಧಿಕಾರ ವರ್ಗಾವಣೆ ಮಾಡಲಾಗುವುದಾಗಿ ತಿಳಿಸಿದರು.

ನಿಮ್ಮ ಸಲಹೆ , ಅಭಿಪ್ರಾಯಗಳನ್ನ ತಪ್ಪದೆ [email protected] ಗೆ ಕಳುಹಿಸಿ
ಕೂಟದ ಚಟುವಟಿಕೆಗಳನ್ನು https://www.facebook.com/sirigannadakootamunich , https://www.instagram.com/sirigannadakootamunich ನಲ್ಲಿಅನುಸರಿಸಬಹುದು
( ಫೋಟೋ ಕೃಪೆ : ಅಮಿತ್ ಕಡಸೂರ್)( ಫೋಟೋ ಕೃಪೆ : ರಜತ್ ಶೆಣೈ )

Leave a Reply